ಜೂನ್ ೧, ೧೯೬೭, ಗುರುವಾರದಂದು ಔರಾದಿನಲ್ಲಿ ಶ್ರೀಮತಿ ಮಹಾದೇವಿ ಖೂಬ ಮತ್ತು ಶ್ರೀ ಗುರುಬಸಪ್ಪ ಖೂಬ ರವರಿಗೆ ಜನಿಸಿದರು, ಮೇ ೯ ಮೇ ೧೯೯೯ ರಂದು ಶ್ರೀಮತಿ ಶೀಲ ಖೂಬಾರನ್ನು ಮದುವೆಯಾಗಿದ್ದಾರೆ. ಇವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯ, ತುಮಕೂರಿನಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಭಾರತೀಯ ಜನತಾ ಪಕ್ಷದಲ್ಲಿರುವ ಇವರು ಬೀದರ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. == ಅಲಂಕರಿಸಿದ ಹುದ್ದೆಗಳು == ೨೦೧೪ ಸೆಪ್ಟೆಂಬರ ೦೧ - ಲೋಕಸಭೆ ಸದಸ್ಯರು ೨೦೧೪ ಸೆಪ್ಟೆಂಬರ ೧೫ - ಸದಸ್ಯರು, ಲೋಕಸಭೆ ಸದಸ್ಯರಿಗೆ ಗಣಕ ವಿತರಿಸುವ ಸಮಿತಿ ಮತ್ತು ಸದಸ್ಯರು, ಸಲಹಾ ಸಮಿತಿ, ರೈಲ್ವೆ ಮಂತ್ರಾಲಯ ೨೦೧೬ ಅಕ್ಟೋಬರ ೧೯ - ಸದಸ್ಯರು, ಆಹಾರ, ನಾರೀಕ ಸೇವೆ ಮತ್ತು ಸಾರ್ವಜನಿಕ ಹಂಚಿಕೆ == ಸಾಧನೆಗಳು == == ವಿವಾದ == ಹೈದರಾಬಾದ ಕರ್‍ನಾಟಕ ಜನಪರ ಸಂಘರ್ಷ ಸಮಿತಿಯು ಶ್ರೀಯುತರು ಕರ್ನಾಟಕದ ಕೆಲಸಗಳ ಬಗ್ಗೆ ಕಾಳಜಿ ವಹಿಸದೆ, ಮಹಾರಾಷ್ಟ್ರದಿಂದ ಆಯ್ಕೆಯಾದವರಂತೆ ವರ್ತಿಸುತ್ತಿದ್ದಾರೆ. ಕರ್ನಾಟಕಕ್ಕಿಂತ ಹಚ್ಚು ಮಹಾರಾಷ್ಟ್ರದ ರೈಲು ಯೋಜನೆಗಳಿಗೆ ಒತ್ತು ನೀಡಿದ್ದಾರೆ ಹಾಗು ಕಲಬುರಗಿ ರೈಲು ವಿಭಾಗಕ್ಕಾಗಿ ಶ್ರಮಿಸಿಲ್ಲವೆಂದು ಅಪಾದಿಸಿದೆ. == ಉಲ್ಲೇಖ ==